ಡ್ರಗ್ಸ್ ಪ್ರಕರಣದಲ್ಲಿ ಹೊರಬಂದ ನಂತರವೂ ಸೈಲಾಂಟಾಗಿದ್ದ ನಟಿ ಸಂಜನಾ ಗಲ್ರಾನಿ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ಮೂಲಕ ಗಾಂಧಿನಗರದಲ್ಲಿ ಮತ್ತೆ ಸುದ್ದಿ ಮಾಡತೊಡಗಿದ್ದಾರೆ.
ಡ್ರಗ್ಸ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾನಿ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಎದುರು ನೋಡ್ತಿದ್ದರು. ಇದೀಗ ಜಿ. ವೆಂಕಟ ಕೃಷ್ಣನ್ ನಿರ್ದೇಶನದಲ್ಲಿ ಸಿದ್ದಗೊಳ್ಳುತ್ತಿರುವ ‘ಮಣಿಶಂಕರ್ ಎಂಬ ಚಿತ್ರದಲ್ಲಿ ನಟಿಸಲು ಸಂಜನಾ ರೆಡಿಯಾಗಿದ್ದಾರೆ.
ಲಾಕ್‌ಡೌನ್ ಸಡಿಲಗೊಂಡಿರುವ ಕಾರಣ ಚಿತ್ರರಂಗದ ಚಟುವಟಿಕೆಗಳು ಪುನರಾಂಭಗೊಂಡಿದೆ.. ಮತ್ತೆ ನಟನೆಗೆ ವಾಪಸ್ ಆಗಿರುವ ನಟಿ ಸಂಜನಾ ಗಲ್ರಾನಿ ಇದೀಗ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ಮಣಿಶಂಕರ್ ಚಿತ್ರದಲ್ಲಿ ಸಂಜನಾ ಗಲ್ರಾನಿ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಮಣಿ ಶಂಕರ್ ಚಿತ್ರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಸೇರಿದಂತೆ ಪಂಚಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದು ಮಹಿಳಾ ಪ್ರಧಾನ ಚಿತ್ರವಾಗಲಿದ್ದು, ಸದ್ಯದಲ್ಲೇ ಆಂಧ್ರ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗಿದೆ.