ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ನಿರ್ಮಾಪಕ ಸಾರಾ ಗೋವಿಂದ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ.
ರಾಜಾಜಿನಗರದ ಸುಭಾಷ್ ಚಂದ್ರ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ಸಾರಾ ಗೋವಿಂದ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಡವರಿಗೆ ಕಾರ್ಮಿಕ ವರ್ಗದವರಿಗೆ ಸಾರಾ ಗೋವಿಂದ್ ಎರಡು ಸಾವಿರ ಕಿಟ್ ಹಂಚಿದ್ದಾರೆ. ಸಾರಾ ಗೋವಿಂದ್ ನಮ್ಮ ನಾಡಿನವರು, ಕೆ.ಆರ್.ನಗರದವರು. ನಮ್ಮವರು ಇಂತ ಕಾರ್ಯಕ್ರಮ ಮಾಡಬೇಕಾದರೆ ತಪ್ಪಿಸಿಕೊಳ್ಳೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಸಾರಾ ಗೋವಿಂದ್ ಈ ಹಿಂದೆನೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರೆ ಶಾಸಕರು ಅಥವಾ ಎಂಎಲ್ ಸಿ ಹಾಗೂ ಮಿನಿಸ್ಟರ್ ಆಗ್ತಾ ಇದ್ದರು. ತಡವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಆದರೂ ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದರು.