ಸಂಚಾರಿ ವಿಜಯ್ ಹಾಗೂ ಸತೀಶ್ ನೀನಾಸಂ ಒಳ್ಳೆಯ ಸ್ನೇಹಿತರು ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಅವ್ರು ನಿಧನರಾದ ಬಳಿಕ ಸತೀಶ್ ನಿನಾಸಂ ಹೆಚ್ಚು ಡಿಸ್ಟರ್ಬ್ ಆಗಿದ್ರು. ನಾಳೆ ಸತೀಶ್ ನಿನಾಸಂ ಹುಟ್ಟುಹಬ್ಬ ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಗೆಳೆಯನಿಲ್ಲದೆ ಹುಟ್ಟು ಹಬ್ಬ ಆಚರಿಸಿಕೊಳ್ಳೋದಕ್ಕೂ ಬ್ರೇಕ್ ಹಾಕಿದ್ದಾರೆ. ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬಾ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೊಮ್ಯಾಖ್ಸ್ ಟೀಸರ್ ಕೂಡ ಮುಂದೂಡಿದ್ದೇವೆ ಥ್ಯಾಂಕ್ಯೂ ಎಂದಿದ್ದಾರೆ.