ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿತ್ ಸೇವಾ ತೆರಿಗೆ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಗ್ರಾಹಕರ ಗಾಯದ ಮೇಲೆ ಬರೆ ಎಳೆದಿದೆ.
ಎಸ್ ಬಿಐ ಮಂಗಳವಾರ ಹೊಸ ನಿಯಮ ಪ್ರಕಟಿಸಿದ್ದು, ಜುಲೈ 1ರಿಂದ ಈ ನಿಯಮದ ಪ್ರಕಾರ ಗ್ರಾಹಕರು ಆನ್ ಲೈನ್ ಮೂಲಕ ತಿಂಗಳಿಗೆ ಗರಿಷ್ಠ 4 ಬಾರಿ ಮಾತ್ರ ಡ್ರಾ ಮಾಡಬಹುದಾಗಿದೆ. 4ಕ್ಕಿಂತ ಹೆಚ್ಚು ಬಾರಿ ಎಟಿಎಂಗಳಲ್ಲಿ ಡ್ರಾ ಮಾಡಿದರೆ ಜಿಎಸ್ ಟಿ ಸೇರಿ ಪ್ರತಿ ಡ್ರಾಗೆ 15 ರೂ. ಶುಲ್ಕ ವಿಧಿಸಲಿದೆ.
ಗ್ರಾಹಕರು ವರ್ಷಕ್ಕೆ 10 ಚೆಕ್ ಲೀವ್ಸ್ (ಬುಕ್ ಅಲ್ಲ) ಬಳಕೆಗೆ ನಿರ್ಬಂಧಿಸಲಾಗಿದೆ. 10ಕ್ಕಿಂತ ಹೆಚ್ಚು ಚೆಕ್ ಬಳಕೆ ಮಾಡಿದರೆ ಅದಕ್ಕೂ ಗ್ರಾಹಕರು ಶುಲ್ಕ ಪಾವತಿಸಬೇಕಾಗುತ್ತದೆ. 10 ಚೆಕ್ ನಂತರ ಪ್ರತಿ 25 ಚೆಕ್ ಗಳ ಬುಕ್ ಪಡೆಯಲು 40 ರೂ. ಜಿಎಸ್ ಟಿ ಸೇರಿ 75 ರೂ. ಪಾವತಿಸಬೇಕಾಗುತ್ತದೆ. ತುರ್ತು ಬಳಕೆಗೆ ಚೆಕ್ ಬುಕ್ ಬೇಕಾದರೆ 10 ಚೆಕ್ ಗಳಿಗೆ 50 ರೂ. ಪಾವತಿಸಬೇಕಾಗುತ್ತದೆ.
ಚೆಕ್ ಬಳಕೆ ಮತ್ತು ಎಟಿಎಂ ಬಳಕೆಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ. ಮೂಲಗಳ ಪ್ರಕಾರ ಎಸ್ ಬಿಐ ಗ್ರಾಹಕರ ಮೇಲೆ ವಿವಿಧ ರೀತಿಯ ಶುಲ್ಕ ವಿಧಿಸುವ ಮೂಲಕ 2015-20ರ ಅವಧಿಯಲ್ಲಿ 300ಕೋಟಿ ರೂ. ಆದಾಯ ಗಳಿಸಿತ್ತು. ಪ್ರತಿ ಡೆಬಿಟ್ ವರ್ಗಾವಣೆಯಿಂದ ಎಸ್ ಬಿಐ 17.17 ಕೋಟಿ ರೂ. ಸಂಪಾದನೆ ಮಾಡುತ್ತಿದೆ.