ಲಂಡನ್: ವಿಡಿಯೋ ಗೇಮ್ ಆಡುವುದರ ಮೂಲಕ ಹಂದಿಗಳು ಚಕಿತಗೊಳಿಸಿವೆ. ವಿಜ್ಞಾನಿಗಳು ಹಂದಿಗಳಿಗೆ ವಿಡಿಯೋ ಗೇಮ್ ಆಡುವ ಬಗ್ಗೆ ತರಬೇತಿ ನೀಡಿದ್ದಾರೆ. ಆಶ್ಚರ್ಯವೆಂದರೆ ಹಂದಿಗಳು ಅದರಲ್ಲಿ ಸಕ್ಸಸ್ ಆಗಿ ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿವೆ. ಯಾರ್ಕ್ ಶೈರ್ ನ 3 ಹಂದಿಗಳಿಗೆ ವಿಡಿಯೋ ಗೇಮ್ ಆಡುವ ತರಬೇತಿಯನ್ನು ನೀಡಲಾಗಿದೆ. ಎಬೊನಿ ಮತ್ತು ಐವರಿ ಜಾತಿಯ ಹಂದಿಗಳು ವಿಡಿಯೋ ಗೇಮ್ ಆಡುವುದನ್ನು ಕಲಿಯಬಹುದೇ ಎಂದು ಪರೀಕ್ಷಿಸಲು ವಿಜ್ಞಾನಿಗಳು ಪ್ರಯೋಗವೊಂದನ್ನು ನಡೆಸಿದ್ದಾರೆ. ಈ ಪರೀಕ್ಷೆಯಲ್ಲಿ ಹಂದಿಗಳು ಯಶಸ್ವಿಯಾಗಿವೆ.
ಈ ತರಬೇತಿಯ ಮೊದಲ ಭಾಗದಲ್ಲಿ ಹಂದಿಗಳಿಗೆ ಜಾಯ್ ಸ್ಟಿಕ್ ನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ತಿಳಿಸಲಾಯಿತು. ಜಾಯ್ ಸ್ಟಿಕ್ ಸಹಾಯದಿಂದ ಹಂದಿಗಳು ವಿಡಿಯೋ ಗೇಮ್ ಆಡುವುದನ್ನು ಕಲಿತಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಚಿಂಪಾಂಜಿ ಅರವಳಿಕೆ ತಜ್ಞ ಸಾರಾ ಬಾಯ್ಸೆನ್ ಹಂದಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಈ ಅಧ್ಯಯನದ ಮೂಲಕ ಹಂದಿಗಳ ಬುದ್ಧಿವಂತಿಕೆಯ ಬಗ್ಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ. ಉತ್ತಮವಾಗಿ ಆಟ ಆಡಿದ ಹಂದಿಗಳಿಗೆ ಬಹುಮಾನವಾಗಿ ಅವುಗಳ ಇಷ್ಟದ ಆಹಾರವನ್ನು ನೀಡಲಾಯಿತು. ಇದರಿಂದ ಸಂತಸಗೊಂಡ ಹಂದಿಗಳು ತಮ್ಮ ಬುದ್ಧಿಮತ್ತೆಯನ್ನು ತೋರಸಿವೆ. ಸದ್ಯ ಹಂದಿಗಳು ವಿಡಿಯೋ ಗೇಮ್ ಆಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೇ, ಹಂದಿಗಳ ಬುದ್ಧಿವಂತಿಕೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.