ಬೆಂಗಳೂರು : ರಾಜಧಾನಿಯಲ್ಲಿ ಚುಮು ಚುಮು ಚಳಿ ಆರಂಭವಾಗಿದೆ. ರಾತ್ರಿಯಾಗುತ್ತಿದ್ದಂತೆಯೇ ಆರಂಭವಾಗುವ ಚಳಿ ಸೂರ್ಯೋದಯದವರೆಗೂ ಹಾಗೆಯೇ ಇರುತ್ತದೆ. ಮುಂದಿನ ವಾರದಿಂದ ಚಳಿ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಡಿಸೆಂಬರ್ನಿಂದ ಫೆಬ್ರವರಿವರೆಗೆ ಚಳಿಗಾಲ ಇರಲಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ ಮೂರನೇ ವಾರದ ವೇಳೆಗೆ ತಾಪಮಾನ ಕಡಿಮೆಯಾಗುತ್ತದೆ. ಈ ವರ್ಷವೂ ಇದೇ ಅವಧಿಯಲ್ಲಿ ತಾಪಮಾನ ಕಡಿಮೆಯಾಗಲಿದೆ. ಪ್ರಸಕ್ತ ವರ್ಷ ಎಲ್ನೋ ಇರುವುದರಿಂದ, ಚಳಿಗಾಲವು ಕಳೆದ ವರ್ಷದಷ್ಟು ತೀವ್ರವಾಗಿರುವುದಿಲ್ಲಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ…
0 1 Less than a minute