ಪರಿಶಿಷ್ಟ ವರ್ಗ (ಎಸ್ ಟಿ) ಸಮುದಾಯಕ್ಕೆ ಪ್ರತ್ಯೇಕ ಖಾತೆ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಮಂಗಳವಾರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಟಿ ಸಮುದಾಯದ ಬೇರೆ ಬೇರೆ ಇಲಾಖೆಗಳ ಮೂಲಕ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಸ್ ಟಿ ಕಲ್ಯಾಣಾಭಿವೃದ್ದಿಗೆ ಪ್ರತ್ಯೇಕ ಸೆಕ್ರೇಟರಿಯಟ್ ಜಾರಿಗೆ ತರಲಾಗುವುದು ಎಂದರು.
ಸಾಮಾನ್ಯವಾಗಿ ಸಚಿವ ಸಂಪುಟ ಪುನಾರಚನೆ ಒಂದರಿಂದ ಮೂರು ವಾರ ಆಗೋದು ಸಾಮಾನ್ಯ. ಆದರೆ ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ.
ನಾನು ಎರಡು ದಿನಗಳ ಪ್ರವಾಹ ಪ್ರವಾಸದಲ್ಲಿದ್ದೆ. ಅಲ್ಲದೇ ಎರಡು ದಿನಗಳ ಕಾಲ ದೆಹಲಿಯದ್ದು ಸಚಿವ ಸಂಪುಟ ರಚನೆ ಅನುಮತಿ ಪಡೆದುಕೊಂಡು ಬಂದಿದ್ದೇನೆ. ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ. ಖಾತೆ ಹಂಚಿಕೆ ಮಾಡೋದು ನಾನೇ ಎಂದರು.