ಬೆಂಗಳೂರು: ನಾಯಕಿ ನಟಿ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಜುಲೈ 19ರಿಂದ ಆರಂಭಗೊಳ್ಳಬೇಕಿದ್ದ ಹಿಟ್ಲರ್ ಕಲ್ಯಾಣ ಧಾರವಾಹಿ ಮುಂದೂಡಿಕೆಯಾಗಿದೆ.
ಧಾರವಾಹಿಯ ಚಿತ್ರೀಕರಣದ ವೇಳೆ ನಾಯಕಿ ಪಾತ್ರಧಾರಿಯ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಧಾರವಾಹಿಯ ದಿನಾಂಕವನ್ನು ಮುಂದೂಡಲಾಗಿದೆ.
ಧಾರವಾಹಿ ಪ್ರಸಾರ ದಿನಾಂಕ ಮುಂದೂಡಿಕೆಯಾದ ಸುದ್ದಿ ದೃಢಪಟ್ಟಿದೆ. ಆದರೆ ಧಾರವಾಹಿ ತಂಡ ಇದಕ್ಕೆ ಬಹಿರಂಗವಾಗಿ ಕಾರಣ ತಿಳಿಸಿಲ್ಲ. ಆದರೆ ಅಪಘಾತವೇ ಈ ಮುಂದೂಡಿಕೆಗೆ ಕಾರಣ ಎನ್ನಲಾಗಿದೆ.