ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸ್ಥಾನದಿಂದ ಎತ್ತಂಗಡಿ ಆಗಿರುವ ಶಿಲ್ಪಾ ನಾಗ್ ಸೇರಿದಂತೆ 9 ಐಎಎಸ್ ಮತ್ತು 19 ಐಪಿಎಸ್ ಅಧಿಕಾರಿಗಳು ಗಡುವು ಮುಗಿದು 6 ತಿಂಗಳು ಕಳೆಯುತ್ತಾ ಬಂದರೂ ಸಲ್ಲಿಸಿಲ್ಲ!
ಹೌದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಮ್ಮ ಆಸ್ತಿ ವಿವರ ಸಲ್ಲಿಸಲು ಜನವರಿಯಲ್ಲಿ ಸಲ್ಲಿಸಬೇಕಿತ್ತು. ಆನ್ ಲೈನ್ ನಲ್ಲಿ ಆಸ್ತಿ ವಿವರ ಸಲ್ಲಿಕೆಗೆ ಅವಕಾಶವಿದ್ದರೂ ಈ ಅಧಿಕಾರಿಗಳು ವಿವರ ನೀಡಿಲ್ಲ.
ಆಸ್ತಿ ವಿವರಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಇಲಾಖೆ ವ್ಯವಸ್ಥೆ ಮಾಡಿದೆ. ಆದರೂ ಅಧಿಕಾರಿಗಳು ಆಸ್ತಿ ವಿವರವನ್ನು ನಿಗದಿತ ವೇಳೆಯಲ್ಲಿ ಸಲ್ಲಿಸದೇ ಇರುವುದು ಸಾರ್ವಜನಿಕರ ಅನುಮಾನ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜೀನಾಮೆ ನೀಡಿರುವ ಐ.ಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಅವರ ಜೊತೆ ಐಎಎಸ್ ಅಧಿಕಾರಿಗಳಾದ ಮೊಹಮ್ಮದ್ ವಾಹ್ಸಿನ್, ನೀಲಾ ಮಂಜುನಾಥ್, ಸಲ್ಮಾಕೆ ಪಾಹಿಮ್. ನಗತ್ ತಬಸಾಮ್ ಅಬ್ರೋ.ಶೆಟ್ಟಣ್ಣನವರ್.ಎಸ್.ಬಿ., ಅಕ್ಷಯ ಶ್ರೀಧರ್. ಲೋಖಂಡೆ ಸ್ನೇಹಲ್, ಸುದಾಕರ್ ಆಕಾಶ್ ಎನ್. ಮುಂತಾದವರು ಇನ್ನೂ ಆಸ್ತಿ ವಿವರ ಸಲ್ಲಿಸಿಲ್ಲ.