ಮುಂಬೈ: ಮಹಾರಾಷ್ಟ್ರ ರಾಜ್ಯಾದ್ಯಂತ ಕೇಂದ್ರ ಸರ್ಕಾರ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಿಸಿರುವುದಕ್ಕೆ ಶಿವಸೇನೆ ಪ್ರತಿಭಟನೆ ಮಾಡಿದೆ. ತೈಲಬೆಲೆ ಏರಿಕೆ ವಿರುದ್ಧ ಗ್ಯಾಸ್ ಸಿಲಿಂಡರ್ ನ್ನು ತಲೆಮೇಲೆ ಹೊತ್ತು ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಗೆ ಕೇಂದ್ರ ಜಗ್ಗದಿದ್ದರೆ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಿವಸೇನೆಯ ಮುಖಂಡರು ಹೇಳಿದ್ದಾರೆ. ಎತ್ತಿನ ಗಾಡಿ ಮತ್ತು ಸೈಕಲ್ ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಪ್ರತಿಭಟನೆ ನಡೆಸಲಾಯಿತು.