ತೆಲುಗು-ತಮಿಳಿನಲ್ಲಿ ಸಿಲ್ಕ್ ಸಿನಿಮಾ : ಸ್ಮಿತಾಳ ಪಾತ್ರದಲ್ಲಿ ಈ ಹಾಟ್ ಬೆಡಗಿ
ಸಿಲ್ಕ್ ಸ್ಮಿತಾ, ಈ ಬಣ್ಣದ ಲೋಕ ಎಂದೂ ಮರೆಯಲಾರದೆ ತಾರೆ. ಮಾದಕ ಮೈಮಾಟ, ತುಂಟ ನೋಟ, ಮೈಮರೆಸುವಂತಿದ್ದ ನಾಟ್ಯದಿಂದ ಎಲ್ಲರನ್ನ ಥಕಥೈ ಥಕಥೈ ಅಂತಾ ಕುಣಿಸಿದಾಕೆ.. ಆದ್ರೆ ಆಕೆಯ ಜೀವನ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಅನ್ನೋ ಸತ್ಯ ಎಲ್ರಿಗೂ ಗೊತ್ತಿರೋದೆ.. ಹಾಗಾಗಿನೆ ಸಿನಿಮಾ ಮಂದಿಗೆ ಆಕೆ ಅಂದ್ರೆ ಏನೋ ಕ್ರೇಜ್. ಈಗಾಗ್ಲೆ ದಿ ಡರ್ಟಿ ಪಿಕ್ಚರ್ ಹೆಸರಿನಲ್ಲಿ ಈ ಹಾಟ್ ಸುಂದರಿಯ ಕಂಪ್ಲೀಟ್ ಹಿಸ್ಟ್ರೀನೆ ಬಿಚ್ಚಿಟ್ಟಿದ್ದಾರೆ. ಹೀಗಿದ್ದೂ ಕೂಡ ಮತ್ತೊಮ್ಮೆ ಸಿಲ್ಕ್ ಸ್ಮಿತಾ ಕಹಾನಿ ಹೇಳೋದಕ್ಕೆ ಹೊರಟಿದ್ದಾರೆ. ತೆಲುಗು ಮಂದಿ.

ತೆಲುಗಿನಲ್ಲಿ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾ ಸೆಟ್ಟೇರ್ತಿದೆ. ಆದ್ರೆ ಅಲ್ಲಿರೋ ಕ್ಯೂರಿಯಾಸಿಟಿ ಅಂದ್ರೆ, ಸಿಲ್ಕ್ ಸ್ಮಿತಾ ಆಗಿ ಕಾಣಿಸ್ಕೊಳ್ತಿರೋ ನಟಿ ತೆಲುಗು ಇಂಡಸ್ಟ್ರೀಯ ಮಾನಮರ್ಯಾದೆಯನ್ನ ನಡು ಬೀದಿಲಿ ಕುಳಿತು ಹರಾಜು ಹಾಕಿದ್ದ ಬೆತ್ತಲೆ ಸ್ಟಾರ್ ಶ್ರೀರೆಡ್ಡಿ. ಶ್ರೀರೆಡ್ಡಿ ಯಾರಿಗೆ ಗೊತ್ತಿಲ್ಲಾ ಹೇಳಿ, ಮಾಡಿರೋದು ಮೂರು ಮತ್ತೊಂದು ಸಿನಿಮಾವಾಗಿದ್ರು, ಟಾಲಿವುಡ್ ದಂಧೆ ಕಹಾನಿಯನ್ನ ಜಗತ್ತಿಗೆ ಸಾರಿ ಫೇಮಸ್ ಆದಾಕೆ.

ಶ್ರೀರೆಡ್ಡಿ ಈಗ ಸಿಲ್ಕ್ ಸ್ಮಿತಾ ಆಗಿ ಕಾಣಿಸಿಕೊಳ್ತಿದ್ದಾರೆ ಅನ್ನೋ ಕಾರಣಕ್ಕಾಗಿನೆ, ಸಿನಿಮಾ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಸಿಲ್ಕ್ ಮೇಲಿನ ಡರ್ಟಿ ಪಿಕ್ಚರ್ ಬಂದಿದ್ರೂ ಸಹ, ಈ ಸಿನಿಮಾ ಮೇಲಿನ ಕ್ರೇಜ್ ಕಡಿಮಿಯಾಗಿಲ್ಲಾ. ಶ್ರೀರೆಡ್ಡಿ ಮತ್ತೇನು ನ್ಯೂಡ್ ವಿಷ್ಯಾನ ಬಿಚ್ಚಿಡ್ತಾಳೋ ಅನ್ನೋ ಅನುಮಾನ ಎಲ್ಲರದ್ದು, ಅಂದಹಾಗೆ ಈ ಚಿತ್ರ ತೆಲುಗು ಹಾಗು ತಮಿಳಿನಲ್ಲಿ ಅಟ್ ದ ಸೇಮ್ ಟೈಂನಲ್ಲಿ ಶುರುವಾಗ್ತಿದ್ದು, ಮಧು ಎಂಬುವವರು ಆಕ್ಷನ್ ಕಟ್ ಹೇಳ್ತಿದ್ದಾರೆ.

ಶ್ರೀ ರೆಡ್ಡಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಇಬ್ಬರ ಫೋಟೋವನ್ನ ಶೇರ್ ಮಾಡಿಕೊಂಡಿದ್ದು, ಸಿನಿಮಾದಲ್ಲಿ ಸಿಲ್ಕ್ ಆಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಬಗ್ಗೆ ಸಣ್ಣ ಕ್ಲ್ಯೂ ಬಿಟ್ಟುಕೊಟ್ಟಿದ್ದಾರೆ. ಈಗಾಗ್ಲೇ ಪ್ರೀಪೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು ಮಾಡಲಿದ್ದಾರಂತೆ. ಒಟ್ನಲ್ಲಿ ಬಣ್ಣದ ಲೋಕದ ಡರ್ಟಿ ಹುಡುಗಿಯ ಡರ್ಟಿ ಸ್ಟೋರಿ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್‍ನನ್ನ ಆವರಿಸ್ಕೊಳ್ತಿದ್ದು, ಹೇಗೆ ಸಿನಿ ಅಭಿಮಾನಿಗಳನ್ನ ಸೆಳೆಯುತ್ತೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.