ಬೀದರ್: ಮಂಗ್ಲಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಾಬರ್ಟ್ ಸಿನಿಮಾದ ಕಣ್ಣೆ ಅದಿರಿಂದಿ ಹಾಡು ಹಾಡಿದ್ದೇ ತಡ, ತೆಲುಗು ಮಂದಿಗಷ್ಟೇ ಅಲ್ಲ ಗಡಿ ದಾಟಿ, ಕರ್ನಾಟಕದಲ್ಲೂ ಫೇಮಸ್ ಆಗೋದ್ರು. ಎಲ್ಲರ ಸ್ಟೇಟಸ್‍ನಲ್ಲೂ ಆಕೆಯದ್ದೇ ಹಾಡು. ಹೀಗೆ ಫೇಮಸ್ ಆಗಿದ್ದೇ ತಡ ಕನ್ನಡಕ್ಕೂ ತರುವ ಪ್ರಯತ್ನ ಸಕ್ಸಸ್ ಆಗಿಯೇ ಹೋಯ್ತು. ಕನ್ನಡದ ಸಿನಿಮಾವೊಂದರಲ್ಲಿ ಅವರ ಧ್ವನಿಯಲ್ಲಿ ಹಾಡನ್ನು ಹಾಡಿಸಿ ಆಗಿದೆ. ಇದೀಗ ಅವರನ್ನ ಚುನಾವಣಾ ಪ್ರಚಾರಕ್ಕೆ ಕರೆ ತರಲಾಗುತ್ತಿದೆ.
ಈಗಾಗಲೇ ಮಸ್ಕಿ ಚುನಾವಣಾ ಕಣ ರಂಗೇರಿದೆ. ಎಲ್ಲಾ ಪಕ್ಷದವರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸೋದಕ್ಕೆ ತೆಲುಗು ಖ್ಯಾತ ಗಾಯಕಿ ಮಂಗ್ಲಿಯನ್ನ ಕರೆತರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪರ ಪ್ರಚಾರ ನಡೆಸಲಿದ್ದಾರೆ.
ರಾಯಚೂರಿನಲ್ಲಿ ತೆಲುಗು ಮಾತನಾಡುವ ಜನ ಹೆಚ್ಚಾಗಿದ್ದಾರೆ. ಹೀಗಾಗಿ ಮಂಗ್ಲಿಯನ್ನ ಆ ಕ್ಷೇತ್ರದ ಪ್ರಚಾರಕ್ಕೆ ಆಹ್ವಾನ ಮಾಡಲಾಗಿದೆ. ಏಪ್ರಿಲ್ 13 ಅಂದ್ರೆ ನಾಳೆ ಮಂಗ್ಲಿ ಮಸ್ಕಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.