ನಿಶ್ಚಯಕೊಂಡ ಮದುವೆಯನ್ನ ನಿರಾಕಾರಿಸಿದ ತಂಗಿಯನ್ನ ಅಣ್ಣ ಕೊಡಲಿ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಚಂದ್ರಕಲಾ (22) ಕೊಲೆಯಾದ ದುರ್ದೈವಿ. ಅಣ್ಣ ಶ್ಯಾಮಸುಂದರ ತಂಗಿಯನ್ನ ಕೊಲೆ ಮಾಡಿದ್ದಾನೆ,
ಚಂದ್ರಕಲಾಗೆ ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಯುವಕನ ಜೊತೆ ಇದೇ ತಿಂಗಳ 23ರಂದು ಮದುವೆ ನಿಶ್ಚಯವಾಗಿತ್ತುಇದಕ್ಕೆ ಕುಟುಂಬಸ್ಥರು ಮದುವೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಚಂದ್ರಕಲಾ ಹುಡುಗ ಕಪ್ಪುಗಿದ್ದಾನೆ ಎನ್ನುವ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ನಿರಾಕಾರಿಸಿದ್ದಾಳೆ. ಆಗ ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ತಂಗಿಯನ್ನೇ ಅಣ್ಣ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಣ್ಣನನ್ನು ಪೊಲೀಸರು ಬಂಧಿಸಿದ್ದು, ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.