ದೂರದ ಊರಿಗೆ ತಂಗಿಯನ್ನು ಮದುವೆ ಮಾಡಿಕೊಡುವುದಕ್ಕೆ ಅಸಮಾಧಾನಗೊಂಡ ಅಕ್ಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀರಾಂಪುರದಲ್ಲಿ ಸಂಭವಿಸಿದೆ.
ತಂಗಿ ಬಿಂದುಳನ್ನು ಚಿಕ್ಕಮಗಳೂರಿನ ಕೊಪ್ಪಕ್ಕೆ ಮದುವೆ ಮಾಡಿಕೊಟ್ಟಿದ್ದರಿಂದ ಅಕ್ಕ ಲಕ್ಷ್ಮೀ (34) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶ್ರೀನಿವಾಸ್ ಎಂಬುವವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಲಕ್ಷ್ಮೀ ತವರು ಮನೆಯಲ್ಲೇ ಇದ್ದಳು. ಲಕ್ಷ್ಮೀ ವಿರೋಧದ ನಡುವೆಯೂ ಬಿಂದುಳನ್ನು ವಿವಾಹ ಮಾಡಿಕೊಡಲಾಗಿತ್ತು.
ಸೆಪ್ಟೆಂಬರ್ 16ರಂದು ಬಿಂದುಳ ಮದುವೆ ಆಗಿದ್ದು, ಮದುವೆಯಿಂದ ಅಸಮಾಧಾನಗೊಂಡ ಲಕ್ಷ್ಮೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.