ಸಾಮಾಜಿಕ ಹೋರಾಟಗಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕನಾಥ್ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಕಾಂಗ್ರೆಸ್ ಧ್ವಜ ಸ್ವೀಕರಿಸಿದ ನಂತರ ಮಾತನಾಡಿದ ಸಿ.ಎಸ್.ದ್ವಾರಕನಾಥ್, 40 ವರ್ಷ ಸಾಮಾಜಿಕ ಹೋರಾಟ ಮಾಡಿದ್ದೇನೆ. ಪತ್ರಕರ್ತನಾಗಿ 20 ವರ್ಷ ಕೆಲಸ ಮಾಡಿದ್ದೇನೆ. ಇಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದೇನೆ ಎಂದರು.
ಜಾತಿ ಸಮೀಕರಣ, ಸಂಪನ್ಮೂಲ ಕ್ರೋಢೀಕರಣ ಮಾಡುವಲ್ಲಿ ಅರಸು ಆಡಳಿತ ಯಶಸ್ವಿಯಾಗಿದ್ದರು. ನಾನು ಅದೇ ಗುರಿ ಇಟ್ಟುಕೊಂಡು ಬಂದಿದ್ದೇನೆ. ಸಣ್ಣ ಸಮುದಾಯ ಸೇರಿಸುವ ಕೆಲಸ ಮಾಡಬೇಕಿದೆ. ದಕ್ಕಲಿಗ ಸಮುದಾಯವನ್ನ ಮನಮೋಹನ್ ಗುರುತಿಸಿದ್ದರು. ಆ ಸಮುದಾಯದ ಅಭಿವೃದ್ಧಿಗೆ ನೆರವಾಗಿದ್ದರು. ಇಂತಹ ಸಮುದಾಯಗಳನ್ನ ಗುರ್ತಿಸಿದ್ದು ಕಾಂಗ್ರೆಸ್ ಎಂದು ಅವರು ಹೇಳಿದರು.