ತಾಯಿ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನೊಬ್ಬನಿಗೆ ಮಗ ಹಾಗೂ ಆತನ ಸ್ನೇಹಿತರು ರಸ್ತೆ ಬದಿಯಲ್ಲೇ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಬಳಿ ಹಲ್ಲೆ ನಡೆದಿದ್ದು, ಶಹಾಪೂರ ತಾಲೂಕಿನ ಹಾಲಬಾವಿ ಗ್ರಾಮದ ಯುವಕ ಹಲ್ಲೆಗೊಳಗಾದ ಯುವಕ. ಇಜೇರಿ ಗ್ರಾಮದ ಹಣಮಂತ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಯುವಕನ ಸಂಬಂಧಿಕರು ಬಂದು ಹಣಮಂತ ಮತ್ತು ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಪ್ರತಿ ದೂರು ದಾಖಲಾಗಿದೆ.