ಜಿಲ್ಲಾಪಂಚಾಯತ್ ಸಿಇಓ ಆದ ವಿಧ್ಯಾರ್ಥಿನಿ..!
ಯಾದಗಿರಿ : ರಾಷ್ಟ್ರೀಯ ಹೆಣ್ಣು ಮಗು ದಿವಸದ ಅಂಗವಾಗಿ, ಗ್ರಾಮೀಣ ಭಾಗದ ವಿದ್ಯಾರ್ಥಿನಿ ಕೆಲ ಹೊತ್ತು ಐಎಎಸ್ ಶ್ರೇಣಿಯ ಜಿ.ಪಂ ಸಿಇಓ ಆಗಿ ಅಧಿಕಾರ ಸ್ವೀಕರಿಸುವುದರ ಜೊತೆಗೆ ಸಾಮಾನ್ಯ ಸಭೆಯ ಮುಂದಾಳತ್ವ ವಹಿಸಿಕೊಂಡ ಘಟನೆಗೆ ಯಾದಗಿರಿ ಜಿಲ್ಲಾ ಪಂಚಾಯತ ಕಚೇರಿ ಸಾಕ್ಷಿಯಾಗಿದೆ.
ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಪ್ರಗತಿ, ಕೆಲ ಹೊತ್ತು ಅಥಿತಿ ಜಿ.ಪಂ ಸಿಇಓ ವಿದ್ಯಾರ್ಥಿನಿ ಕಾರ್ಯ ನಿರ್ವಯಿಸಿದಳು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ತುಂಬವ ಉದ್ದೇಶದಿಂದ ಕೆಲ ಹೊತ್ತು, ಹಾಲಿ ಇ.ಪಂ. ಸಿಇಓ ಶಿಲ್ಪಾ ಶರ್ಮಾ ತಮ್ಮ ಸ್ಥಾನ ಬಿಟ್ಟು ಕೊಟ್ಟು ತಮ್ಮ ಕಾರ್ಯಾದ ಬಗ್ಗೆ ವಿವರಣೆ ನೀಡಿದ್ರು. ಬಳಿಕ ಅಥಿತಿ ಸಿಇಓ ಪ್ರಗತಿ ಸಭೆಯ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸವನಗೌಡ ಯಡಿಯಾಪುರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಾಮಾನ್ಯ ಸಭೆ ಸಹ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿ ಪ್ರಗತಿ ಹೆಣ್ಣಿನ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಸಹಕಾರ ನೀಡಬೇಕೆಂದು ಭಾಷಣ ಮಾಡಿದಳು. ಇನ್ನು, ಕೆಲ ಹೊತ್ತು ಸಿಇಓ ಚೇರ್ ಮೇಲೆ ಕುಳಿತು ಪ್ರಗತಿ ಮತ್ತು ಅದನ್ನು ಕಂಡ ಆಕೆಯ ಸ್ನೇಹಿತೆಯರ ಮತ್ತು ಶಾಲಾ ಸಿಬ್ಬಂದಿ ಸಂತಸಕ್ಕೆ ಪಾರವೇ ಇರಲಿಲ್ಲ. ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿ ಪ್ರಭಾಕರ್ ಅವರ ತಂಡ ,ಹೆಣ್ಣಿನ ಮಹತ್ವದ ಸಾರಲು ಈ ಅಪರೂಪದ, ಕಾರ್ಯಕ್ರಮ ಆಯೋಜನೆ ಮಾಡಿದ್ರು.
