ಸೆಕ್ಷನ್ 66A ರದ್ದು ಮಾಡಿ ವರ್ಷಗಳೇ ಕಳೆದಿದ್ದರೂ ಇನ್ನೂ ದೇಶದಲ್ಲಿ ಬಳಕೆ ಆಗುತ್ತಿರುವ ವಿಷಯವನ್ನು ಗಮನಿಸಿರುವ ಸುಪ್ರೀಂಕೋರ್ಟ್ ಆಘಾತ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಐಟಿ ಆ್ಯಕ್ಟ್ 66A ರದ್ದು ಮಾಡಿ ವರ್ಷಗಳೇ ಕಳೆದಿವೆ. ಆದರೆ ಈ ಸೆಕ್ಷನ್ ಉಲ್ಲಂಘನೆ ಆರೋಪದಡಿ 11 ರಾಜ್ಯಗಳಲ್ಲಿ 745 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಬಂಧ ಪಟ್ಟ ಕಾನೂನು ರದ್ದಾದರೂ ಇದರಡಿ ಹೇಗೆ ಪ್ರಕರಣ ದಾಖಲಾಗುತ್ತವೆ ಎಂದು ಆಘಾತ ವ್ಯಕ್ತಪಡಿಸುತ್ತಿರುವುದಾಗಿ ಸೋಮವಾರ ಕೇಂದ್ರ ಸರಕಾರಕ್ಕೆ ಕಳುಹಿಸಿದ ನೋಟಿಸ್ ನಲ್ಲಿ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಇಂಟರ್ ನೆಟ್ ಫ್ರೀಡಂ ಫೌಂಡೇಷನ್ ಈ ಅಂಕಿ-ಅಂಶಗಳನ್ನು ಕಲೆ ಹಾಕಿದ್ದು, 2015 ಮಾರ್ಚ್ ನಲ್ಲಿ ಶ್ರೇಯ ಸಿಂಘಲ್ ತೀರ್ಪಿನಲ್ಲಿ ವೇಶ್ಯಾವಾಟಿಕೆಗೆ ಸಂಬಂಧಿಸಿ 66A ಸೆಕ್ಷನ್ ರದ್ದುಗೊಳಿಸಲಾಗಿತ್ತು. ಆದರೆ ಅದಾದ ನಂತರ 1307 ಪ್ರಕರಣ ದಾಖಲಾಗಿದೆ.