ಆಫ್ಘಾನಿಸ್ತಾನ ವಶಪಡಿಸಿಕೊಳ್ಳಲು ಮುನ್ನುಗ್ಗುತ್ತಿರುವ ತಾಲಿಬಾನ್ ಪಡೆ ಇದೀಗ ಭಾರತ ಆಫ್ಘಾನ್ ಸೇನೆಗೆ ಉಡುಗೊರೆಯಾಗಿ ನೀಡಿದ್ದ ಎಂಐ24 ಯುದ್ಧ ಹೆಲಿಕಾಫ್ಟರ್ ಅನ್ನು ವಶಪಡಿಸಿಕೊಂಡಿದೆ.
ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಕಂದುಜ್ ಬಳಿ ಭಾರತದ ಹೆಲಿಕಾಫ್ಟರ್ ಜೊತೆ ನಿಂತು ಫೋಸ್ ಕೊಟ್ಟಿರುವ ಫೋಟೋ ಹಾಗೂ ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ.
ಆದರೆ ದಾಳಿ ಬಳಸುವ ಹೆಲಿಕಾಫ್ಟರ್ ನ ರೂಟರ್ ಬ್ಲೇಡ್ ನಾಪತ್ತೆಯಾಗಿದೆ. ಬಹುಶಃ ಆಫ್ಘಾನ್ ಯೋಧರು ಈ ಹೆಲಿಕಾಫ್ಟರ್ ಬಳಕೆ ಆಗದಂತೆ ಇದನ್ನು ತೆಗೆದು ಹಾಕಿರಬೇಕು ಎಂದು ಶಂಕಿಸಲಾಗಿದೆ.