ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ತಾಲಿಬಾಲ್ ಉಗ್ರ ಸಂಘಟನೆ ಶತ್ರುಗಳ ನಾಶಕ್ಕೆ ಕಾರ್ಯಾಚರಣೆ ಆರಂಭಿಸಿದ್ದು, ಪತ್ರಕರ್ತನ ಸಂಬಂಧಿಕರನ್ನು ಹತ್ಯೆ ಮಾಡಿದೆ.
ಈ ಹಿಂದೆ ಆಫ್ಘಾನಿಸ್ತಾನ ಸರಕಾರದಲ್ಲಿ ಗುಪ್ತಚರ ಮಾಡುತ್ತಿದ್ದ ಹಾಗೂ ಸಹಕಾರ ನೀಡುತ್ತಿದ್ದ ಸಾವಿರಾರು ವ್ಯಕ್ತಿಗಳನ್ನು ಗುರಿಯಾಗಿಸಿ ಹತ್ಯೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ವೇಳೆ ಸರಕಾರದ ಜೊತೆ ಇದ್ದ ನ್ಯಾಟೋ ಸಿಬ್ಬಂದಿಯ ಶೋಧ ನಡೆದಿದ್ದು, ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನ್ಯಾಟೋ ಸಿಬ್ಬಂದಿ ಹಾಗೂ ಹಿಂದಿನ ಸರಕಾರದಲ್ಲಿ ಮಾಹಿತಿದಾರರಾಗಿ ಕೆಲಸ ಮಾಡಿದ್ದವರು ತಾವಾಗಿಯೇ ಗುರುತಿಸಿಕೊಳ್ಳಿ. ಇಲ್ಲದಿದ್ದರೆ ಅವರನ್ನು ಪತ್ತೆ ಹಚ್ಚಿ ಗಲ್ಲಿಗೇರಿಸಲಾಗುವುದು ಎಂದು ತಾಲಿಬಾನ್ ಸಂದೇಶ ರವಾನಿಸಿದೆ.