ಆಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ಶುಕ್ರವಾರ ಅಧಿಕೃತವಾಗಿ ಸರಕಾರ ರಚನೆ ಮಾಡಲಿದೆ.
ಆಗಸ್ಟ್ 15ರದು ಆಫ್ಘಾನಿಸ್ತಾವನ್ನು ವಶಪಡಿಸಿಕೊಂಡ 2 ವಾರಗಳ ನಂತರ ತಾಲಿಬಾನಿ ಸಂಘಟನೆ ನಾಳೆ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಂತರ ಸರಕಾರ ರಚಿಸಲಿದೆ ಎಂದು ಸಂಘಟನೆ ಹೇಳಿಕೊಂಡಿದೆ.
ಅಮೆರಿಕ ಸೇನೆ ಅಧಿಕೃತವಾಗಿ ಆಫ್ಘಾನಿಸ್ತಾನದಿಂದ ಕಾಲ್ಕಿತ್ತ ನಂತರ ತಾಲಿಬಾನ್ ಉಗ್ರ ಸಂಘಟನೆ ಗುರುವಾರ ಅಧಿಕೃತವಾಗಿ ಹೊರಡಿಸಿದ ಪ್ರಕರಣೆಯಲ್ಲಿ ತಿಳಿಸಿದೆ.