ಬಹುಕೋಟಿ ರೂ. ವಂಚನೆ ಭೀತಿ ಹಿನ್ನೆಲೆಯಲ್ಲಿ ಗುಜರಾತ್ ವಜ್ರ ತಯಾರಕರು ಮತ್ತು ರಫ್ತು ಕಂಪನಿಗಳನ್ನು ಗುರಿಯಾಗಿಸಿ ಆದಾಯ ತೆರಿಗೆ ಇಲಾಖೆಯ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ ಮಂಡಳಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೆಪ್ಟೆಂಬರ್ 22 ಮತ್ತು 23ರಂದು ದಾಳಿ ನಡೆಸಿದ್ದು, ವಜ್ರದ ವ್ಯಾಪಾರಿಗಳು ಮಾತ್ರವಲ್ಲದೇ ಸೂರತ್, ನವಸಾರಿ, ಮೊರ್ಬಿ ಮತ್ತು ವಾಂಕೇನರ್ ಗಳಲ್ಲಿನ ಮಾರ್ಬಲ್ ತಯಾರಕರ ಮೇಲೂ ದಾಳಿ ನಡೆದ ದಾಳಿ ಇನ್ನೂ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಸುಮಾರು 518 ಕೋಟಿ ರೂ. ಮೌಲ್ಯದ ಸಣ್ಣ ಮೌಲ್ಯದ ವಜ್ರಗಳ ಖರೀದಿ ಮತ್ತು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಅದರಲ್ಲೂ ಸುಮಾರು 95 ಕೋಟಿ ಮೌಲ್ಯದ ವಜ್ರಗಳನ್ನು ನೇರ ನಗದು ಪಡೆದು ಲೆಕ್ಕ ಇಡದೇ ಮಾರಾಟ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.