ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಸೌಥ್ ಹ್ಯಾಂಪ್ಟನ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದೆ.
ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಆರಂಭಗೊಳ್ಳಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು.
ಭಾರತ ತಂಡದ ಆಟಗಾರರು ನ್ಯೂಜಿಲೆಂಡ್ ಗೆ ಬಂದಿಳಿದ ನಂತರ ಕೋವಿಡ್ ನಿಯಮದ ಪ್ರಕಾರ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಗುರುವಾರ ಮೈದಾನಕ್ಕಿಳಿದ ತಂಡದ ಆಟಗಾರರು ನೆಟ್ ಅಭ್ಯಾಸ ಆರಂಭಿಸಿದರು.