ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಇದ್ದಂತೆ ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ಬಿಜೆಪಿಯಲ್ಲಿ ನಡೆಯಲ್ಲ. ಬಿಜೆಪಿಯಲ್ಲಿ ದಲಿತ ಯುವಕನನ್ನು ಗುರುತಿಸಿ ನಾಯಕತ್ವ ಬೆಳಸುವ ಉದ್ದೇಶದಿಂದ ಈ ಬಾರಿ ದಲಿತ ಯುವಕನನ್ನು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದವರು ಯಾರೋ? ಆಮೇಲೆ ಅಧ್ಯಕ್ಷರಾದವರು ಯಾರೋ? ನಮ್ಮ ಕಡೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಿತ್ತಾಡುತ್ತಿದ್ದಾರೆ. ಎಲೆಕ್ಷನ್ ಮಾಡುತ್ತಾರೆ ಆಮೇಲೆ ಫ್ರಾಡ್ ಅಂತಾರೆ. ಈಗ ಫಿಫ್ಟಿ ಫಿಫ್ಟಿ ಅಂತಾರೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ನಲ್ಲಿ ಮೊಮ್ಮಕ್ಕಳು ಆದವರಿಗಷ್ಟೇ ಯುವ ಘಟಕದ ಅಧ್ಯಕ್ಷ ಸ್ಥಾನ ಕೊಡುತ್ತಾರೆ ಎಂದು ತೇಜಸ್ವಿ ಸೂರ್ಯ ಎರಡು ರಾಷ್ಟ್ರೀಯ ಪಕ್ಷಗಳನ್ನು ಲೇವಡಿ ಮಾಡಿದರು.