ನೆಚ್ಚಿನ ನಟ-ನಟಿಯರನ್ನ ನೋಡೋದಕ್ಕೆ, ಅವರನ್ನ ಮಾತಾಡಿಸೋದಕ್ಕೆ ಅಭಿಮಾನಿಗಳು ಎಂತಹ ಸಾಹಸಕ್ಕೂ ಕೈ ಹಾಕುತ್ತಾರೆ. ಆದರೆ ಇಲ್ಲೊಬ್ಬ ಕನ್ನಡದ ತಾರೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ತೆಲಂಗಾಣದಿಂದ ಬಂದು ಪಡಿಪಾಟಲು ಅನುಭವಿಸಿದ್ದಾನೆ
ಹೌದು, ಆಕಾಶ್ ತ್ರಿಪಾಠಿ ಎಂಬ ಹುಚ್ಚು ಅಭಿಮಾನಿ ರಶ್ಮಿಕಾ ಮಂದಣ್ಣ ಅವರ ಎಂತಹ ಅಭಿಮಾನಿ ಎಂದರೆ ಅವರನ್ನು ಖುದ್ದು ನೋಡಬೇಕು ಎಂದು ತೆಲಂಗಾಣದಿಂದ ಮಡಿಕೇರಿಗೆ ರೈಲು ಹತ್ತಿ ಬಂದಿದ್ದಾನೆ.
ರಶ್ಮಿಕಾ ಮಂದಣ್ಣ ಅವರನ್ನು ಒಂದು ಬಾರಿ ನೋಡಬೇಕು ಎಂದು ಆಕಾಶ್ ತ್ರಿಪಾಠಿ ತೆಲಂಗಾಣದಿಂದ ರೈಲು ಹತ್ತಿ ಮೈಸೂರಿಗೆ ಬಂದು, ಅಲ್ಲಿಂದ ಗೂಡ್ಸ್ ಆಟೋ ಮೂಲಕ ವಿರಾಜಪೇಟೆ ತಲುಪಿದ್ದಾನೆ. ಆದರೆ ರಶ್ಮಿಕಾ ಮಂದಣ್ಣ ಅವರ ಮನೆ ಯಾವುದು ಎಂದು ತಿಳಿಯದೇ ಸುತ್ತಾಡಿದ್ದಾನೆ.
ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಓಡಾಡುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತ್ರಿಪಾಠಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹುಚ್ಚು ಅಭಿಮಾನದ ಬಗ್ಗೆ ತಿಳಿದು ಅಭಿಮಾನಿಗೆ ಬುದ್ದಿ ಹೇಳಿ ತೆಲಂಗಾಣಕ್ಕೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ.