ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು (PV . SINDHU ) ಥಾಯ್ಲೆಂಡ್ ( THAILAND ) ಓಪನ್‌ನ ಸೆಮಿಫೈನಲ್‌ನಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಸೋತಿದ್ದಾರೆ. ಟೋಕಿಯೊ ಒಲಿಂಪಿಕ್ (tokyo olampic )ಚಿನ್ನದ ಪದಕ ವಿಜೇತೆ ಯು ಫೀ 21-17, 21-16 ನೇರ ಸೆಟ್‌ಗಳಿಂದ ಸಿಂಧು ಅವರನ್ನು ಸೋಲಿಸಿದರು.
ಪಂದ್ಯದ ಆರಂಭದಲ್ಲಿ 10-15 ರಿಂದ ಯು ಫೀಗೆ ಹಿನ್ನಡೆಯಾದ ನಂತರ, ಸಿಂಧು 15-17 ಗೆ ತರಲು ಪ್ರಯತ್ನಿಸಿದರಾದರೂ ಚೀನಿ ಆಟಗಾರ್ತಿ ಫೀ ಮೊದಲ ಗೇಮ್ ನ್ನು 21-17 ರಿಂದ ಗೆದ್ರು.ಎರಡನೇ ಗೇಮ್‌ನಲ್ಲಿ ಸಿಂಧು 10-5 ರಿಂದ ಮುನ್ನಡೆ ಸಾಧಿಸಲು ಉತ್ತಮವಾಗಿ ಆರಂಭ ಪಡೆದುಕೊಂಡರು. ಆದರೆ ಎದುರಾಳಿ ಯು ಫೀ ಗೇಮ್‌ನ ದ್ವಿತೀಯಾರ್ಧದಲ್ಲಿ ಮರಳಿ ಸಿಂಧುವನ್ನು 21-16 ರಿಂದ ಸೋಲಿಸಿ ಫೈನಲ್‌ಗೆ ಮುನ್ನಡೆದರು.ಈ ಸೋಲಿನೊಂದಿಗೆ ಸಿಂಧು ಥಾಯ್ಲೆಂಡ್ ಓಪನ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಫೈನಲ್‌ನಲ್ಲಿ ಯು ಫೀ ತೈವಾನ್‌ನ ತೈ ತ್ಸು ಯಿಂಗ್ ಅಥವಾ ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ. ಇದನ್ನೂ ಓದಿ : – ಥಾಮಸ್ ಕಪ್ 2022 – ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ