ತಮಿಳು ಸೂಪರ್ ಸ್ಟಾರ್ ನಟ ಜೋಸೆಫ್ ವಿಜಯ್ ಹೆತ್ತವರು ಸೇರಿದಂತೆ 11 ಮಂದಿಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮ ಅಥವಾ ಗುಂಪು ಸೇರುವುದಕ್ಕೆ ಯಾವುದೇ ಕಾರಣಕ್ಕೂ ತಮ್ಮ ಹೆಸರು ಬಳಕೆ ಮಾಡಬಾರದು ಎಂದು ನಿರ್ದೇಶನ ನೀಡುವಂತೆ ಕೋರಿ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಂದೆ ಎಸ್.ಎ.ಚಂದ್ರಶೇಖರ್ ಮತ್ತು ತಾಯಿ ಶೋಭಾ ಸೇರಿದಂತೆ 11 ಮಂದಿಯ ಹೆಸರನ್ನು ಉಲ್ಲೇಖಿಸಿದ್ದು, ಸೆಪ್ಟೆಂಬರ್ 11ರಂದು ನ್ಯಾಯಾಲಯ ದಾವೆ ಹೂಡಲಾಗಿದೆ. ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯ ವಿಚಾರಣೆ ಮುಂದೂಡಿದೆ.
ತಂದೆ ಚಂದ್ರಶೇಖರ್, ವಿಜಯ್ ರಾಜಕೀಯ ಪ್ರವೇಶಿಸುವುದು ಒಳ್ಳೆಯದು. ಈಗಲೇ ಅವರು ರಾಜಕೀಯ ಪಕ್ಷದ ಹೆಸರನ್ನು ನೋಂದಾಯಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿಕೆ ನೀಡಿದ್ದರು.