ಕೊರೋನಾ ಲಸಿಕೆಯ ಎರಡನೇ ಡೋಸ್ ಮತ್ತು ಮುಂಜಾಗ್ರತಾ ಡೋಸ್ ನಡುವಿನ ಅಂತರವನ್ನು ಸರ್ಕಾರ ಶೀಘ್ರವೇ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಎಂದು ಮುಖ್ಯ ಆರೋಗ್ಯಧಿಕಾರಿ ಎ,ಎಸ್ ಬಾಲ ಸುಂದರ್(A.S.BALASUNDAR) ರಾಜ್ ನ್ಯೂಸ್ ಜೊತೆ ಹೇಳಿದ್ದಾರೆ.
ಸದ್ಯ ಈ ಡೋಸ್ ಗಳ ನಡುವೆ 9 ತಿಂಗಳ ಅಂತರ ಇದೆ. 2 ಡೋಸ್ ಪಡೆದ 6 ತಿಂಗಳ ನಂತರ ಮನುಷ್ಯನ ದೇಹದಲ್ಲಿ ಪ್ರತಿರೋಧ ಶಕ್ತಿ ಕುಗ್ಗುತ್ತದೆ. ಹೀಗಾಗಿ ಬೂಸ್ಟರ್ ಡೋಸ್ ನೀಡಬೇಕು ಎಂದು ಐಸಿಎಂಆರ್( ICMR ) ಮತ್ತು ಇತರ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಸಲಹೆ ನೀಡಿದ್ದವು. ಇದನ್ನೂ ಓದಿ : – ಇಂದಿನಿಂದ ನಾಲ್ಕನೇ ಹಂತದಲ್ಲಿ ಕೋವಿಡ್ ವ್ಯಾಕ್ಸಿನೇಶನ್
ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳ ಆಧಾರದಲ್ಲಿ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರವನ್ನು 6 ತಿಂಗಳಿಗೆ ತಗ್ಗಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರವೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮುಖ್ಯ ಆರೋಗ್ಯಧಿಕಾರಿ ಎ,ಎಸ್ ಬಾಲ ಸುಂದರ್ ತಿಳಿಸಿದ್ದಾರೆ. ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್