ದಾವಣಗೆರೆಯಲ್ಲಿ(Davangere) ರಾತ್ರಿ ಊಟಕ್ಕೆ ಚಿಕನ್ (Chicken) ಮಾಡಲಿಲ್ಲವೆಂದು ಪತ್ನಿಯನ್ನೇ ಪತಿ ಕೊಂದಿರುವ ಘಟನೆ. ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
ಕೆಂಚಪ್ಪ (Kenchappa) ಎಂಬ ವ್ಯಕ್ತಿ ತನ್ನ ಪತ್ನಿ ಶೀಲಾ (28) ಎಂಬುವಳನ್ನು ಹತ್ಯೆ ಮಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ನಿನ್ನೆ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಕೆಂಚಪ್ಪ ರಾತ್ರಿ ಊಟಕ್ಕೆ ಚಿಕನ್ ಸಾಂಬರ್ ಮಾಡಿಲ್ಲವೆಂದು ಪತ್ನಿ ಮೇಲೆ ಗಲಾಟೆ ಮಾಡಿದ್ದಾನೆ. ಬಳಿಕ ಪತ್ನಿ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೆಂಚಪ್ಪ ಶೀಲಾಳನ್ನು (Sheela) 9 ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಆಗಾಗ ಇಬ್ಬರ ನಡುವೆ ಜಗಳವಾಗುತ್ತಿದ್ದು, ಪೋಷಕರು ಪಂಚಾಯತಿ ನಡೆಸಿ ಒಂದು ಮಾಡುತ್ತಿದ್ದರು. ಶೀಲಾಳ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದ ಕೆಂಚಪ್ಪ ಹತ್ಯೆಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : – ಗೋಕಾಕ್ ನಲ್ಲಿ ಕಾಲೇಜ್ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸರ್ಕಾರಿ ಬಸ್