545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಮಾತನಾಡಿದ್ದರಿಂದ ಹಗರಣ ಹೊರಗೆ ಬಂದಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರು ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ ರಿಂದ ಪೊಲೀಸರು ಅವರನ್ನು ಹೊರಗೆ ತಂದಿದ್ದಾರೆ. ಇದನ್ನೂ ಓದಿ :- ಅಕ್ಷಯ ತೃತೀಯದಂದು ಭರ್ಜರಿ ಸೇಲ್ – 15,000 ಕೋಟಿ ಆಭರಣ ಮಾರಾಟ
ನಿಷ್ಟಾವಂತ ಅಧಿಕಾರಿ ವಿರುದ್ಧ ಮಾತನಾಡಿದ್ದರಿಂದ ಹೊರತಂದಿದ್ದಾರೆ. ಇಲ್ಲದಿದ್ದರೆ ಪಿಎಸ್ಐ ಪರೀಕ್ಷೆ ಅಕ್ರಮವನ್ನು ಸರ್ಕಾರ ಮುಚ್ಚಿ ಹಾಕುತಿತ್ತು. ಸಚಿವ ಅಶ್ವಥ್ ನಾರಾಯಣ ಬಗ್ಗೆ ಬಿಜೆಪಿಯವರೇ ಮಾಹಿತಿ ನೀಡಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಶೇಕಡ 80 ರಷ್ಟು ಅಕ್ರಮ ನಡೆದಿದೆ. ಸರ್ಕಾರಕ್ಕೆ 200% ಮುಖಭಂಗವಾಗಿದೆ. ಸಚಿವ ಅಶ್ವಥನಾರಾಯಣ ವಿರುದ್ಧ ಕಾಂಗ್ರೆಸ್ನವರು ಆರೋಪಿಸಿದ್ದಾರೆ. ಅಶ್ವಥ್ ನಾರಾಯಣ ಸಹೋದರನ ವಿರುದ್ಧ ಹಣ ಪಡೆದ ಆರೋಪ ಕೇಳಿಬಂದಿದೆ. ಪಿಎಸ್ಐ ಆಯ್ಕೆಯಾಗಿದ್ದ ದರ್ಶನ್ ಗೌಡ ನಾಪತ್ತೆಯಾಗಿದ್ದಾರೆ. ವಿಚಾರಣೆಗೆ ಕರೆದು ದೂರವಾಣಿ ಕರೆ ಬಳಿಕ ಬಿಟ್ಟು ಕಳಿಸಿದ್ದಾರೆ. ತನಿಖಾಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವಂತೆ ನಡೆದುಕೊಳ್ಳುವುದು ತಪ್ಪು. ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೊಳಗಾಗದೆ ವ್ಯವಸ್ಥೆ ಬದಲಿಸಲಿ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ :- ಕಠ್ಮಂಡು ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ – ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್