ವಿಜಯಪುರ: ಮಾಜಿ ಸಚಿವ ಹಾಗೂ ಶಾಸಕ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಾಲೇಜ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಯುತ್ತಿದ್ದರೆ ಇತ್ತ ಕಳ್ಳರು ಅಂತ್ಯಕ್ರಿಯೆಗೆ ಬಂದಿದ್ದ ಜನರ ಸಾವಿರಾರು ಹಣ, ಮೊಬೈಲ್ ಕದ್ದಿದ್ದಾರೆ.
ನಾಲ್ಕೈದು ಕಳ್ಳರು ತಮ್ಮ ಕೈಚಳಕ ತೋರಿಸಿ ನಗದು, ಮೊಬೈಲ್ ಹಾಗೂ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಆದರೆ, ಓರ್ವ ಕಳ್ಳನ್ನು ಸ್ಥಳೀಯರು ಹಿಡಿದು ಸಿಂದಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರು ಆಲಮೇಲ ಪಟ್ಟಣ ನಿವಾಸಿಗಳ ಜೇಬು ಕತ್ತಿರಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.