ಬೆಳಗಾವಿ (Belagavi) ಯ ಯಮಕನಮರಡಿ ಮತಕ್ಷೇತ್ರದಲ್ಲಿ ರಮೇಶ್ ಕತ್ತಿ (Ramesh katti) ಸಕ್ರಿಯರಾಗಿದ್ದಾರೆ. ಯಮಕನಮರಡಿ ಮತಕ್ಷೇತ್ರವನ್ನ ಗೆಲ್ಲಿಸುವ ಜವಾಬ್ದಾರಿಯನ್ನು ಉಮೇಶ್ ಕತ್ತಿ ವಹಿಸಿಕೊಂಡಿದ್ದರು. ಆದ್ರೆ ಉಮೇಶ್ ಕತ್ತಿ (Umesh katti) ಅಕಾಲಿಕ ನಿಧನರಾದ್ರು.
ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Sathish jarakiholi) ಮತಕ್ಷೇತ್ರದಲ್ಲಿ ಕತ್ತಿ ಸಹೋದರ ಮತ್ತು ಅವರ ಪುತ್ರರು ಸಕ್ರಿಯರಾಗಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸುಳಿವು ಕೊಟ್ಟಿದ್ದಾರೆ. ನಾ ಅಂತೂ ಮಂತ್ರಿ ಸ್ಥಾನದ ಅಪೇಕ್ಷಿತ ಇಲ್ಲಾ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಿದ್ರು. ಉಮೇಶ್ ಕತ್ತಿ ಸ್ಥಾನ ತುಂಬುವಂತಹ ಸಮರ್ಥ ನಾಯಕರು ಜಿಲ್ಲೆಯಲ್ಲಿ ಇದ್ದಾರೆ. ಆ ನಾಯಕತ್ವ ಯಾರಿಗೆ ನೀಡಬೇಕು ಎನ್ನುವುದನ್ನ ವರಿಷ್ಠರು ತೀರ್ಮಾನ ಮಾಡ್ತಾರೆ. ಯಮಕನಮರಡಿ ಮತಕ್ಷೇತ್ರದಲ್ಲಿ ಉಮೇಶ್ ಕತ್ತಿ ಸಹೋದರ ಆ ಸ್ಥಾನವನ್ನು ತುಂಬುತ್ತಾರೆ ಎಂದು ತಿಳಿಸಿದ್ರು. ಯಮಕನಮರಡಿ ಮತಕ್ಷೇತ್ರದ ನಾಲ್ಕು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡ್ತಾರೆ. ಇದನ್ನು ಓದಿ :- ಸಿದ್ದರಾಮಯ್ಯನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು – ನಿಡುಮಾಮಿಡಿ ಶ್ರೀ
ರಮೇಶ್ ಕತ್ತಿ ಸೇರಿ ಅವರ ಪುತ್ರರು ಪಕ್ಷ ಸಂಘಟನೆ ಮಾಡ್ತಾರೆ. ಉಮೇಶ್ ಕತ್ತಿ ಸ್ಥಾನವನ್ನ ತುಂಬುವ ಶಕ್ತಿ ಕತ್ತಿ ಕುಟುಂಬಕ್ಕೆ ಇದೇ. ಈಗಾಗಲೇ ಈ ಬಗ್ಗೆ ವರಿಷ್ಠರು ಹೇಳಿದ್ದಾರೆ. ಕತ್ತಿ ಕುಟುಂಬ ಇನ್ನೂ ದುಃಖದಲ್ಲಿದೆ. ಆ ಬಳಿಕ ರಮೇಶ್ ಕತ್ತಿ ಯಮಕನಮರಡಿ ಮತಕ್ಷೇತ್ರದಲ್ಲಿ ಸಂಘಟನೆ ಆರಂಭಿಸುತ್ತಾರೆ ಎಂದು ಅಭಯ್ ಪಾಟೀಲ್ ತಿಳಿಸಿದ್ದಾರೆ.
ಇದನ್ನು ಓದಿ :- ರಾಷ್ಟ್ರಪತಿಯವರ ದಸರಾ ಉದ್ಘಾಟನ ಕಾರ್ಯಕ್ರಮ ಹಿನ್ನೆಲೆ – ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ನಿರ್ಬಂಧ