ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆಯ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈ ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ( Kota Srinivas Poojary ) ಹೇಳಿದ್ದಾರೆ.
ಮುಖ್ಯಮಂತ್ರಿಗಳನ್ನು ಹಾಗೂ ಶಿಕ್ಷಣ ಸಚಿವರಾದ ನಾಗೇಶ್ ( B.C NAGESH ) ಅವರನ್ನು ಈ ಕುರಿತು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ಸಂದೇಶವನ್ನು ಒಳಗೊಂಡ ಪಾಠವನ್ನು ಕೈಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ :- ಜೂನ್ 3ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ – ಬಿ.ಸಿ ನಾಗೇಶ್ ಟ್ವೀಟ್
ಪ್ರಿಯಾಂಕ್ ಖರ್ಗೆ ( PRIYANKA KHARGE ) ಆರೋಪವನ್ನು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಳ್ಳಿ ಹಾಕಿದ್ದಾರೆ. SC, ST ಗಳಿಗೆ ನೀಡುವ ಗಂಗಾ ಕ್ಯಾಣ ಯೋಜನೆಯಲ್ಲಿ ಅಕ್ರಮವಾಗಿಲ್ಲ. 2 ಗುಂಪುಗಳ ನಡುವೆ ಟೆಂಡರ್ ಸಿಕ್ಕಿರೋದೆ ಸಂಘರ್ಷಕ್ಕೆ ಕಾರಣವಾಗಿದೆ. 3 ಸಾವಿರ ಕೊಳವೆಬಾವಿ ಕೊರೆದಿದ್ದಾರೆ. ಖರ್ಗೆ ಸದನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇನೆ. ಟೆಂಡರ್ ನಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ. ಈಗಾಗಲೇ ತನಿಖಾಧಿಕಾರಿಯನ್ನ ನೇಮಕ ಮಾಡಿದ್ದೇವೆ. ವರದಿ ಬಂದ ಬಳಿಕ ನನ್ನನ್ನೂ ಸೇರಿದಂತೆ ಎಲ್ಲರನ್ನೂ ತನಿಖೆಗೆ ಒಳಪಡಿಸುತ್ತೇನೆ ಎಂದು ತಿಳಿಸಿದ್ರು.
ಇದನ್ನೂ ಓದಿ :- ಮುಂದುವರಿದ ಮಳೆ – ಉಡುಪಿ, ಶಿವಮೊಗ್ಗ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ