ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮಿತ್ ಶಾ ಖೆಲೋ ಇಂಡಿಯಾ ಹಾಗೂ ಪದಾಧಿಕಾರಿಗಳ ಸಭೆ ಮಾಡಲು ಬಂದಿದ್ದಾರೆ. ಅಮಿತ್ ಶಾ ಬಂದಾಗಲೆಲ್ಲ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಲೆ ಇರುತ್ತೆ. ಇದನ್ನು ಓದಿ :- ನಂಜನಗೂಡಿನಲ್ಲಿ ದೇವರ ತಾಳಿ ಕದ್ದ ಕಳ್ಳರು – ಪಶ್ಚಾತಾಪದಿಂದ ವಾಪಸ್
ಆದ್ರೆ ಅಮಿತ್ ಶಾ ನಡ್ಡಾ ಪ್ರಹ್ಲಾದ್ ಜೋಶಿ ಅವರು ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ ಅಂತ ಹಲವಾರು ಬಾರಿ ಹೇಳಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರ ಊಹಾಪೋಹಾ. ಜತೆಗೆ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಶಾಸಕರು ನಿರೀಕ್ಷೆಯಲ್ಲಿದ್ದಾರೆ. ಹಲವಾರು ಭಾರಿ ಸಿಎಂ ಸಹ ದೆಹಲಿಯಲ್ಲಿ ಚರ್ಚೆ ಮಾಡಿದ್ದು, ಸದ್ಯದಲ್ಲೆ ವಿಸ್ತರಣೆ ಆಗುತ್ತೆ ಅನ್ನೋ ಭರವಸೆ ಇದೆ ಎಂದ್ರು. ಇನ್ನೂ ನಾನು ಸಚಿವ ಸ್ಥಾನದ ಆಕಾಂಕ್ಷೆಯಿಂದ ಕೆಲಸ ಮಾಡ್ತಿಲ್ಲ. ನನ್ನ ಮೇಲೆ ಭರವಸೆಯಿಟ್ಟು ಬಿಜೆಪಿ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆ ವಿಶ್ವಾಸದಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದು ವಿಜಯೇಂದ್ರ ತಿಳಿಸಿದ್ರು.
ಇದನ್ನು ಓದಿ :- ಬಿಜೆಪಿ ಸರ್ಕಾರ ವಿರುದ್ದ ಕಿಡಿಕಾರಿದ ಶರತ್ ಬಚ್ಚೇಗೌಡ