ಹಿಜಾಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದ್ರೆ ಮರು ಪರೀಕ್ಷೆಗೆ ಅವಕಾಶವಿಲ್ಲ ಎಂದು ಮೈಸೂರಿನಲ್ಲಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವುದು ಸರ್ಕಾರದ ಕರ್ತವ್ಯ. ಕರ್ತವ್ಯ ಪಾಲಿಸದೆ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ಧರಿಲ್ಲ. ಹಿಜಾಬ್ ಗೆ ಪಟ್ಟು ಬಿದ್ದು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕಾರ ಮಾಡಿ, ವಾಪಸ್ ಮನೆಗೆ ತೆರೆಳಿದ್ದರು. ಕೆಲವರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಇದೇ ರೀತಿ ಮತ್ತೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇರುವುದಿಲ್ಲ. ಇದೇ ವೇಳೆ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಇಂತಹ ಯಾವ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲ ಎಂದ ಮೇಲೆ ಚರ್ಚೆ ಯಾಕೆ ಬೇಕು ಹೇಳಿ? ಈ ಬಗ್ಗೆ ಶಿಕ್ಷಣ ಸಚಿವರೆ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ. ದಿ ಕಾಶ್ಮೀರ್ ಫೈಲ್ಸ್ ನೋಡಲು ಬಲವಂತ ಮಾಡಲ್ಲ. ಚಿತ್ರವನ್ನು ನೋಡೋದು ಬಿಡೋದು ಕಾಂಗ್ರೆಸ್ ಗೆ ಬಿಟ್ಟ ವಿಚಾರ. ಈ ಹಿಂದೆ ಏನು ನಡೆದಿತ್ತು ಎಂದು ಜನರಿಗೆ ಹೇಳಬೇಕು. ಅದೇ ಕೆಲಸವನ್ನು ಈ ಚಿತ್ರ ಮಾಡಿದ್ದು ಅದರಲ್ಲಿ ತಪ್ಪೇನಿದೆ? ಹಾಗಾದರೆ ನಡೆದ ಘಟನಾವಳಿಗಳನ್ನು ಜನರಿಗೆ ತಿಳಿಸುವುದೆ ಬೇಡ್ವಾ? ಎಂದು ಪ್ರಶ್ನಿಸಿದರು.
0 79 Less than a minute