ಬೆಂಗಳೂರು ನಗರದಲ್ಲಿ ಬೈಕ್ ನಲ್ಲಿ ಬಂದ ಮೂವರ ಬಳಿ ಮಾರಕಾಸ್ತ್ರಗಳು ಶುಕ್ರವಾರ ಪತ್ತೆಯಾಗಿದೆ. ಬೈಕ್ನಾಕಾಬಂದಿಯಲ್ಲಿನ ತಪಾಸಣೆ ವೇಳೆ ಮಾರಕಾಸ್ತ್ರಗಳಿರುವುದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಮೂವರು ಆರೋಪಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ವಾರ್ಡ್ ನಂಬರ್ 40ರ ಹೇರೋಹಳ್ಳಿಯಲ್ಲಿ ಕಸ ಕಲೆ ಹಾಕುತ್ತಿದ್ದರು. ಕಸ ಕಲೆ ಹಾಕುವಾಗ ಮನೆ ಮಾಲೀಕರು ಪ್ರೀತಿಯಿಂದ ಒಂದಷ್ಟು ಟಿಪ್ಸ್ ಹಣ ಕೊಡುತ್ತಿದ್ದರು. ಟಿಪ್ಸ್ ಹಣಕ್ಕಾಗಿ ಬೇರೆ ಇಬ್ಬರು ಹೊಸದಾಗಿ ಬಂದು ದುಪ್ಪಟ್ಟು ಟಿಪ್ಸ್ ಪಡೆಯುತ್ತಿದ್ದದ್ದು ಗೊತ್ತಾಗಿ ಅವರಿಬ್ಬರನ್ನು ಮುಗಿಸಲು ಮಾರಕಾಸ್ತ್ರಗಳನ್ನ ಹಿಡಿದು ಕೊಲೆಗೆ ಮಾಡಲು ಆರೋಪಿಗಳು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂದ ಇದೀಗ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು.ಇದೀಗ ಅಪ್ತಾಪ್ತ ಯುವಕರಿಬ್ಬರನ್ನು ಸೇರಿ ಮೂರು ಜನರನ್ನು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ. ಬಂಧಿತರಿಂದ ಎರಡು ಲಾಂಗು , ಚಾಕು, ಒಂದು ಡಿಯೋ ಬೈಕ್ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.