ಆಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ವಶಕ್ಕೆ ಯತ್ನಿಸಿದ್ದು, ಈ ವೇಳೆ ನಡೆದ ಭಾರೀ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ವಿಮಾನ ನಿಲ್ದಾಣದಿಂದ ಸ್ವದೇಶಕ್ಕೆ ಹಿಂತಿರುಗತ್ತಿದ್ದ ಕೆಲವು ವಿಮಾನಗಳು ಬಾಕಿ ಇರುವಾಗ ತಾಲಿಬಾನ್ ದಾಳಿ ಮಾಡಿದ್ದು, ಈ ವೇಳೆ ಅಮೆರಿಕದ ಸೇನೆ ಜನದಟ್ಟಣೆ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಾಬೂಲ್ ವಿಮಾನಿ ನಿಲ್ದಾಣ ಅಕ್ಷರಶಃ ರಣರಂಗವಾಗಿದ್ದು, ವಿದೇಶೀ ವಿಮಾನಗಳು ಹಿಂತಿರುಗಲು ಅಡ್ಡಿಯಾಗಿವೆ ಎಂದು ಹೇಳಲಾಗಿದೆ.