ರಾಮನಗರ : ನಿರ್ಮಾಣ ಹಂತದಲ್ಲಿದ್ದ ಮ್ಯಾನ್ ಹೋಲ್ ಸ್ಚಚ್ಛತೆಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ರಾಮನಗರ ಐಜೂರು ಬಳಿ ನೇತಾಜಿ ಪಾಪೂಲರ್ ಶಾಲೆ ಮುಂಭಾಗ ನಡೆದಿದೆ. ಮೃತಪಟ್ಟವರನ್ನು ಮಂಜುನಾಥ್ (29)ಮಂಜುನಾಥ್ (32) ರಾಜೇಶ್ (40) ಎಂದು ಗುರುತಿಸಲಾಗಿದೆ.
ನಗರದ 30 ನೇ ವಾರ್ಡ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮ್ಯಾನ್ ಹೋಲ್ ಕಾಮಗಾರಿಯನ್ನು ಗುತ್ತಿಗೆದಾರ ಹರೀಶ್ ಎಂಬುವರಿಗೆ ವಹಿಸಲಾಗಿತ್ತು. ಗುತ್ತಿಗೆದಾರನಿಗೆ ಮಾಹಿತಿಯೇ ಇಲ್ಲದಂತೆ ಸ್ವಚ್ಛಗೊಳಿಸಲು ಕಾರ್ಮಿಕರು ಇಳಿದಿದ್ದರೆನ್ನಲಾಗಿದೆ. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಇನ್ನಿಬ್ಬರು ಕಾರ್ಮಿಕರು ಮುಂದಾದಾಗ, ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಮಿಕರ ಶವಗಳನ್ನು ಮೇಲಕ್ಕೆ ತೆಗೆದಿದ್ದು, ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.