KSRTC ಹೆಸರು ಬದಲಾವಣೆ ಕುರಿತು ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ: ಸಚಿವ ಲಕ್ಷ್ಮಣ್​​​ ಸವದಿ

ರಾಯಚೂರು: ಕೇರಳ-ಕರ್ನಾಟಕ ಮಧ್ಯೆ ಕೆಎಸ್​​ಆರ್​​ಟಿಸಿ ಲೋಗೋ ವಿವಾದ ವಿಚಾರದಲ್ಲಿ ಟ್ರೇಡ್ ಮಾರ್ಕ್ ರಿಜಿಸ್ಟರ್​​ನಲ್ಲಿ ವಾಜ್ಯ ಆದೇಶ ಹೊರಬಿದ್ದಿತ್ತು. ಈ ಬಗ್ಗೆ ಕಾನೂನಾತ್ಮಕ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್​​​​​​ ಸವದಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತಬಾಡಿದ ಅವರು, ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳು ಒಂದೇ ಹೆಸರಿನಲ್ಲಿ ಇರಬಾರದು ಎಂಬ ನಿಯಮವಿದೆ. ನಮ್ಮ ದೇಶದಲ್ಲಿ ಮತ್ತು ಬೇರೆ ದೇಶದಲ್ಲಿ ಈ ನಿಯಮವಿದೆ. ಕೇರಳ-ಕರ್ನಾಟಕ ಲಾಭದಾಯಕ ಕಾರ್ಪೋರೇಟ್ ಕಂಪನಿಗಳಲ್ಲ. ನಮ್ಮದು ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆಗಳಾಗಿವೆ. ಅದರ ಹೆಸರಿನಲ್ಲಿ ನಾವು ಲಾಭ ಮಾಡುವುದಿಲ್ಲ. ಅನವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ನಾನು ಅಧಿಕಾರಿಗಳಿಗೆ ಆದೇಶದ ಪ್ರತಿ ಪಡೆಯಲು ಹೇಳಿದ್ದೇನೆ. ಆ ಆದೇಶ ನೋಡಿ ಕಾನೂನು ಸಲಹೆ ಪಡೆದು ಮನವಿ ಮಾಡುವುದರ ಬಗ್ಗೆ ತೀರ್ಮಾನಿಸಲಾಗುವುದು.

ಇನ್ನು ಸದ್ಯ ಬ್ಲ್ಯಾಕ್​​ ಫಂಗಸ್ ಪ್ರಕರಣಗಳು ನಮಗೆ ಸವಾಲಾಗಿವೆ. ಜಿಲ್ಲೆಯಲ್ಲಿ 41 ಜನರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್​ ಫಂಗಸ್ ಸೋಂಕಿತರಿಗೆ 40-45 ದಿನ ಚಿಕಿತ್ಸೆ ಕೊಡಬೇಕಾಗುತ್ತೆ‌. ಅವರಿಗೆ ಸರ್ಕಾರ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ಎಂದು ತಿಳಿಸಿದರು.

ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಅಥವಾ ನಾಳೆ ತಜ್ಞರ ಅಭಿಪ್ರಾಯ ಪಡೆದು, ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 7 ಸಾವಿರದವರೆಗೆ ಪಾಸಿಟಿವ್ ಬರುವವರೆಗೂ ತಜ್ಞರು ಲಾಕ್​ಡೌನ್ ಮುಂದುವರೆಸಲು ಸಲಹೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ರಿಮ್ಸ್​​ನಲ್ಲಿ 20kl ಆಕ್ಸಿಜನ್ ಘಟಕ ಇಂದಿನಿಂದ ಪ್ರಾರಂಭವಾಗಲಿದೆ. 30 ಆಕ್ಸಿಜನ್ ಕಾನ್ಸ್ಂಟ್ರೇಟರ್ ಬಂದಿವೆ. ಮುಂದಿನ ದಿನಗಳಲ್ಲಿ ನಾವು ಯಾರು ಮೈ ಮರೆಯುವಂತಿಲ್ಲ. ಆ ರೀತಿಯಲ್ಲಿ ಎಲ್ಲಾ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!