ಭಾರತದ ಮೀರಾಬಾಯಿ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
ಶನಿವಾರ ನಡೆದ 49 ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ಮೀರಾ ಬಾಯಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮಹಿಳಾ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ಣಂ ಮಲ್ಲೇಶ್ವರಿ ನಂತರ ಈ ಸಾಧನೆ ಮಾಡಿದ ಮೊದಲ ಮಹಿಳೆ ಆಗಿದ್ದಾರೆ. ಚಾನು ಜೆರ್ಕ್ ವಿಭಾಗದಲ್ಲಿ 115 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಚಾನು 84 ಮತ್ತು 87 ಕೆಜಿ ಭಾರ ಎತ್ತಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಚೀನಾದ ಹು ಜಿಯಹು ಚಿನ್ನದ ಪದಕ ಗೆದ್ದುಕೊಂಡರು. ಹು ಜೀಯಹು 94 ಕೆಜಿ ಭಾರ ಎತ್ತಿದರು.