ಭಾರತ ತಂಡ 2-1 ಗೋಲುಗಳಿಂದ ಬ್ರಿಟನ್ ತಂಡವನ್ನು ಬಗ್ಗುಬಡಿದು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದೆ.
ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಭಾರತ ದೀಪ್ ಪ್ರೀತ್ ಸಿಂಗ್ 2 ಹಾಗೂ ಹಾರ್ದಿಕ್ ಒಂದು ಗೋಲು ಬಾರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಭಾರತ 1980ರ ನಂತರ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿತು. 1980ರಲ್ಲಿ ಚಿನ್ನದ ಪದಕ ಗೆದ್ದ ನಂತರ ಭಾರತ ಸೆಮಿಫೈನಲ್ ಪ್ರವೇಶಿಸಿರಲಿಲ್ಲ.
ದಿಲ್ ಪ್ರೀತ್ ಸಿಂಗ್ ಪಂದ್ಯದ 7ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಶುಭಾರಂಭ ಮಾಡಿದರು. ನಂತರ ಎರಡನೇ ಕ್ವಾರ್ಟರ್ ನಲ್ಲಿ ಮತ್ತೊಂದು ಗೋಲು ಸಿಡಿಸಿ ಭಾರತದ ಗೆಲುವಿನ ಭರವಸೆ ಹೆಚ್ಚಿಸಿದರು.
ಬ್ರಿಟನ್ ಮೂರನೇ ಕ್ವಾರ್ಟರ್ ನಲ್ಲಿ ಗೋಲು ಸಿಡಿಸಿ ಅಂತರ ಕಡಿಮೆ ಮಾಡಿದರಾದರೂ ಹಾರ್ದಿಕ್ ಕೊನೆಯ ಹಂತದಲ್ಲಿ ಗೋಲು ಸಿಡಿಸಿ ಗೆಲುವಿನ ಅಂತರ ಹಿಗ್ಗಿಸಿದರು.