ಗೆದ್ದ ಖುಷಿಯಲ್ಲಿ ಅತೀಯಾಗಿ ಸಂಭ್ರಮ ವ್ಯಕ್ತಿಪಡಿಸಿದ ಬಾಕ್ಸರ್ ಗಾಯಗೊಂಡು ಟೋಕಿಯೊ ಒಲಿಂಪಿಕ್ಸ್ ನಿಂದ ಹೊರಬಿದ್ದರೆ, ಎದುರಾಳಿ ಬಾಕ್ಸರ್ ಸೋಲುಂಡರೂ ಫೈನಲ್ ಗೆ ಪ್ರವೇಶಿಸಿ ಬಂಪರ್ ಹೊಡೆದ ವಿಚಿತ್ರ ಘಟನೆ ನಡೆದಿದೆ.
ಭಾನುವಾರ ನಡೆದ ವಾಲ್ಟರ್ ವೇಟ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ಬಾಕ್ಸರ್ ಅಡಿನ್ ವಾಲ್ಶ್, ಮಾರಿಷಶ್ ಬಾಕ್ಸರ್ ಮರ್ವಿನ್ ಕ್ಲೈರ್ ವಿರುದ್ಧ 4-1ರಿಂದ ಗೆಲುವು ಪಡೆದರು.
ಅಡಿನ್ ವಾಲ್ಶ್ ಗೆದ್ದ ಖುಷಿಯನ್ನು ಮೇಲೆ ಹಾರಿ ರಿಂಗ್ ನಲ್ಲಿಯೇ ಸಂಭ್ರಮಿಸಿದರು. ಸಂಭ್ರಮದಲ್ಲಿ ಮೈ ಮರೆತಿದ್ದರಿಂದ ಮೊಣಕಾಲು ಉಳುಕಿಕೊಂಡಿತು. ಕೂಡಲೇ ವೈದ್ಯರು ತಪಾಸಣೆ ಮಾಡಿದಾಗ ಗಾಯದ ಕಾರಣ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಘೋಷಿಸಿದರು.
ಅಡಿನ್ ವಾಲ್ಶ್ ಗಾಯಗೊಂಡಿದ್ದರಿಂದ ಸೋಲುಂಡಿದ್ದ ಮಾರಿಷಶ್ ಬಾಕ್ಸರ್ ಮರ್ವಿನ್ ಕ್ಲೈರ್ ಸೆಮಿಫೈನಲ್ ಪ್ರವೇಶಿಸಿದ್ದೂ ಅಚ್ಚರಿ ಎಂಬಂತೆ ಅಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು.