ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದ್ದಾರೆ.
ಭಾನುವಾರ ಬೆಳಿಗ್ಗೆ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 6ನೇ ಶ್ರೇಯಾಂಕಿತೆ ಪಿವಿ ಸಿಂಧು 21-7, 21-10 ನೇರ ಸೆಟ್ ಗಳಿಂದ ಇಸ್ರೇಲ್ ನ ಶ್ರೇಯಾಂಕ ರಹಿತೆ ಕ್ಸೆನಿಯಾ ಪೊಲಿಕೊರೊವಾ ಅವರನ್ನು ಮಣಿಸಿದರು.
ಡ್ರಾನಲ್ಲಿ ಪಿವಿ ಸಿಂಧು ಜಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸಿಂಧು ಎರಡನೇ ಸೆಟ್ ನಲ್ಲಿ ಆರಂಭದಲ್ಲಿ ನಿಧಾನಗತಿ ಆಡಿದ್ದರಿಂದ ಕೆಲವು ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿದ್ದರು.