ಕುಸ್ತಿಪಟು ರವಿ ದಾಹಿಯಾ ಫೈನಲ್ ನಲ್ಲಿ ಸೋಲುಂಡರೂ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ 5ನೇ ಪದಕ ಒಲಿದಂತಾಗಿದೆ.
ಗುರುವಾರ ನಡೆದ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್ ನಲ್ಲಿ ರವಿ ದಾಹಿಯಾ 7-4 ಅಂಕಗಳಿಂದ ರಷ್ಯಾದ ರೊಕ್ಸೊ ಜಾವುರ್ ಉಘೇವ್ ವಿರುದ್ಧ ಸೋಲುಂಡರು.
ರವಿಕುಮಾರ್ ಇದೀಗ ಸುಶೀಲ್ ಕುಮಾರ್ ನಂತರ ಕುಸ್ತಿಯಲ್ಲಿ ಭಾರತಕ್ಕೆ 2ನೇ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ತನಗಿಂತ ಪ್ರಬಲ ಸ್ಪರ್ಧಿಯ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನಡೆಸಿದರೂ ರವಿ ದಾಹಿಯಾ ವೀರೋಚಿತ ಸೋಲುಂಡರು.