ವಿಶ್ವದ ಅಗ್ರಮನ್ಯ ಆರ್ಚರಿ ಪಟು ದೀಪಿಕಾ ಕುಮಾರಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ ರೋಚಕ ಜಯದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಹವಾಮಾನ ವೈಪರಿತ್ಯ ನಡುವೆ ಬುಧವಾರ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ 6-4 ಸೆಟ್ ಗಳಿಂದ ಅಮೆರಿಕದ ಯುವ ಸ್ಪರ್ಧಿ ಜೆನ್ನಿಫರ್ ಮುಸಿನೊ ಫೆರ್ನಾಂಡೀಸ್ ವಿರುದ್ಧ ರೋಚಕ ಗೆಲುವು ಸಾಧಿಸಿದರು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ದೀಪಿಕಾ ಕುಮಾರಿ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಮೊದಲೆರಡು ಸುತ್ತುಗಳಲ್ಲಿ ಗುರಿಯೇ ಮುಟ್ಟದೇ ಹಿನ್ನಡೆಯ ಆರಂಭ ಪಡೆದರು. ಆದರೆ ನಂತರ ಮೂರು ಬಾಣಗಳಲ್ಲಿ ಪೂರ್ಣ 10 ಅಂಕ ಗಿಟ್ಟಿಸುವ ಮೂಲಕ 4-2ರಿಂದ ಮುನ್ನಡೆ ಸಾಧಿಸಿದರು.
ಆದರೆ ಮತ್ತೆ ಹಿನ್ನಡೆ ಅನುಭವಿಸಿದ್ದರಿಂದ 4-4ರಲ್ಲಿ ಸಮಬಲ ಕಂಡಿತು. ಹಂತದಲ್ಲಿ ಒತ್ತಡ ಮೆಟ್ಟಿ ನಿಂತ ದೀಪಿಕಾ ಕುಮಾರಿ 6-4ರಿಂದ ಗೆದ್ದು 16ರ ಘಟ್ಟಕ್ಕೆ ಲಗ್ಗೆ ಹಾಕಿ ಪದಕದ ಭರವಸೆ ಉಳಿಸಿಕೊಂಡಿದ್ದಾರೆ.