ಬೆಂಗಳೂರಿನ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗಾಲ್ಫ್ ನಲ್ಲಿ ಚೊಚ್ಚಲ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾರೆ.
ವೈಯಕ್ತಿಕ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನಲ್ಲಿ ಅದಿತಿ ಅಶೋಕ್ ಕೇವಲ ಒಂದು ಅಂಕದಿಂದ ಹಿಂದೆ ಉಳಿಯುವ ಮೂಲಕ ಗಾಲ್ಫ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು.
ಪ್ಲೇ ಆಫ್ ಸುತ್ತಿನಲ್ಲಿ ಜಪಾನ್ ನ ಮೊನ್ ಇನಾಮಿ ಮತ್ತು ನ್ಯೂಜಿಲೆಂಡ್ ನ ಲೈಡಾ ಕೊ ಜಂಟಿ ಮೂರನೇ ಸ್ಥಾನ ಪಡೆದರೆ, ಒಂದು ಅಂಕದಿಂದ ಹಿಂದೆ ಬಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಲ್ಲದೇ ಚಿನ್ನದ ಪದಕ ವಿಜೇತೆ ಅಮೆರಿಕದ ನೆಲ್ಲಿ ಕ್ರೊಡಾ ಅವರಿಂದ ಎರಡು ಶಾಟ್ ಅಷ್ಟೇ ಹಿಂದೆ ಇದ್ದರು. ಆದರೆ ಭಾರತದ ಪರ ಗರಿಷ್ಠ ಸಾಧನೆಯ ಹೆಮ್ಮೆಗೆ ಪಾತ್ರರಾದರು.