ಭಾರತ ತಂಡ ರೋಚಕ ಹಣಾಹಣಿಯಲ್ಲಿ 5-4 ಗೋಲುಗಳಿಂದ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯನ್ನು ಮಣಿಸಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಭಾರತಕ್ಕೆ ನಾಲ್ಕನೇ ಪದಕ ಒಲಿದಂತಾಗಿದೆ.
ಕಂಚಿನ ಪದಕಕ್ಕಾಗಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸುವ ಮೂಲಕ ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಪದಕದ ಬರ ನೀಗಿಸಿದೆ. 1981ರಲ್ಲಿ ಭಾರತ ಕೊನೆಯ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡಿತ್ತು.
ಭಾರತದ ಪರ ಸಿಮ್ರನ್ ಜಿತ್ ಸಿಂಗ್ 2 ಗೋಲು ಸಿಡಿಸಿದರೆ, ಹರ್ಮನ್ ಪ್ರೀತ್ ಸಿಂಗ್ ಮತ್ತು ಹರ್ದಿಕ್ ಸಿಂಗ್ ಪೆನಾಲ್ಟಿಯಲ್ಲಿ ತಲಾ ಒಂದು ಗೋಲು ಬಾರಿಸಿದರು. ಈ ಮೂಲಕ 1-3 ಗೋಲುಗಳ ಹಿನ್ನಡೆಯಲ್ಲಿದ್ದ ಭಾರತ 3-3ರಿಂದ ಸಮಬಲ ಸಾಧಿಸಿತು.
ರುಪಿಂದರ್ ಪಾಲ್ ಸಿಂಗ್ ಒಂದು ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರೆ, ಸಿಮ್ರನ್ ಜೀತ್ ಕೊನೆಯಲ್ಲಿ ಮತ್ತೊಂದು ಗೊಲು ಬಾರಿಸಿ ಭಾರತಕ್ಕೆ ಗೆಲುವು ಖಚಿತಪಡಿಸಿದರು.