ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕುವ ಮೂಲಕ ಪದಕದತ್ತ ದಾಪುಗಾಲಿರಿಸಿದ್ದಾರೆ.
ಬುಧವಾರ ನಡೆದ ವನಿತೆಯರ ಸಿಂಗಲ್ಸ್ ಲೀಗ್ ಹಂತದ 2ನೇ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು 21-9, 21-16 ಸೆಟ್ ಗಳಿಂದ ಹಾಂಕಾಂಗ್ ನ ನಗಾನ್ ಯಿ ಚೆಯುಂಗ್ ಅವರನ್ನು ಸೋಲಿಸಿದರು.
ಸಿಂಧುಗೆ ನಾಕೌಟ್ ಪಂದ್ಯದಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫ್ಲೆಡೆಟ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯವನ್ನು ಗೆದ್ದರೆ ಸಿಂಧುಗೆ ಕನಿಷ್ಠ ಪದಕ ಖಚಿತಗೊಳ್ಳುವ ಸಾಧ್ಯತೆ ಇದೆ.