ಭಾರತದ ಭಾವಿಯಾ ಪಟೇಲ್ ಟೇಬಲ್ ಟೆನಿಸ್ ನ ಫೈನಲ್ ನಲ್ಲಿ ಸೋಲುಂಡರೂ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
ಭಾನುವಾರ ನಡೆದ ವನಿತೆಯರ ಸಿಂಗಲ್ಸ್ ಕ್ಲಾಸಿಕ್ 24 ವಿಭಾಗದ ಫೈನಲ್ ನಲ್ಲಿ ಭಾವಿಯಾ ಪಟೇಲ್ ವಿಶ್ವದ ನಂ.1 ಆಟಗಾರ್ತಿ ಚೀನಾದ ಯಿಂಗ್ ಜುಹು ವಿರುದ್ಧ 7-11, 5-11, 6-11 ನೇರ ಸೆಟ್ ಗಳಿಂದ ಸೋಲುಂಡರು.
ಭಾವಿಯಾ ಪ್ಯಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕೇವಲ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಭಾರತ ಪ್ಯಾರಾಲಿಂಪಿಕ್ ಕಮಿಟಿ ಅಧ್ಯಕ್ಷೆಯಾಗಿರುವ ದೀಪಾ ಮಲಿಕ್ ರಿಯೊ ಒಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.