ವಿನೋದ್ ಕುಮಾರ್ ಅನರ್ಹ: ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಾಪಸ್!

ಭಾರತದ ವಿನೋದ್ ಕುಮಾರ್ ಅನರ್ಹಗೊಂಡ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ನ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಗಳಿಸಿದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ.

ಜಪಾನ್ ರಾಜಧಾನಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾನುವಾರ ನಡೆದ ಡಿಸ್ಕಸ್ ಎಸೆತ ಸ್ಪರ್ಧೆಯ ಎಫ್ 56 ವಿಭಾಗ ಕೇವಲ ಭುಜ ಬಲದ ಆಧಾರದ ಮೇಲೆ ನಡೆಯುತ್ತದೆ. ಆದರೆ ಕಾಲುಗಳ ಚಲನೆಯಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ವಿಸ್ತರಿಸಿದ ಹಿನ್ನೆಲೆಯಲ್ಲಿ ವಿನೋದ್ ಕುಮಾರ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ.

ವಿನೋದ್ ಕುಮಾರ್ ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ದಶಕದಷ್ಟು ಸಮಯ ಹಾಸಿಗೆಯಲ್ಲಿದ್ದರು. ಅವರ ತಂದೆ ಕೂಡ ಭಾರತೀಯ ಸೇನೆಯಲ್ಲಿದ್ದು, 1971ರ ಭಾರತ-ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ವಿನೋದ್ ಕುಮಾರ್ 19.91 ಮೀ.ದೂರ ದಾಖಲಿಸಿ ಕಂಚಿನ ಪದಕ ಗೆದ್ದಿದ್ದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!